Shri Kshetra Gokarnapanchanga BUY NOW Shrikshetra Gokarna Panchanga
publishes horoscope books & E-books.
MORE INFO
Horoscope & Astrology Consultancy
by Niranjan Joshi.
MORE INFO
Horoscope & Astrology Consultancy
by Niranjan Joshi.
MORE INFO

About

ತಿಥಿ, ವಾರ, ನಕ್ಷತ್ರ, ಯೋಗ, ಕರಣ ಇವು ಕಾಲದ ಐದು ಅಂಗಗಳು. ಇವುಗಳ ಜೊತೆಗೆ ರಾಶಿ ಮತ್ತು ಗ್ರಹಗಳು ಶುಭಕರ್ಮಗಳಿಗೆ ಯೋಗ್ಯವಾದದ್ದು  ಮುಹೂರ್ತ ಎನ್ನಲ್ಪಡುತ್ತದೆ. ಗೋಕರ್ಣ ಮಂಡಲದ ಸಮಸ್ತ ಜನ ಸಮೂಹದ ನಿಮ್ಮೆಲ್ಲ ನಿತ್ಯ ನೈಮಿತ್ತಿಕ ಕಾಮ್ಯ ಕರ್ಮಗಳನ್ನು ಸರಿಯಾದ ಕಾಲದಲ್ಲಿ ನಡಸಲಿ ಎಂಬ ಉದ್ದೇಶದಿಂದ  ಶ್ರೀ  ಕ್ಷೇತ್ರ ಗೋಕರ್ಣ ಶ್ರೀ ಮಹಾಬಲೇಶ್ವರ ಪಂಚಾಂಗಂ ಎಂಬ ಹೆಸರಿನಿಂದಲೇ ದೃಗ್ಗಣಿತರೀತ್ಯಾ ನಮ್ಮಿ ಪಂಚಾಂಗವನ್ನು ೩೪ ನೇ ಸಂಚಿಕೆಯಾಗಿ ತಯಾರಿಸಲಾಗುತ್ತಿದೆ.

ಸಾರ್ವಜನಿಕರು ಈ ಪಂಚಾಂಗದ ಸದುಪಯೋಗ ಪಡೆದುಕೊಳ್ಳಲೆಂಬುದೇ  ಸಂಪಾದಕರ ಆಶಯ. ಪ್ರತಿನಿತ್ಯ ಪಂಚಾಂಗಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಆದರೆ ಇದಾವುದೂ ಕೂಡ  ನಮ್ಮ ಈ ಪಂಚಾಂಗದ ಅಭಿವೃದ್ದಿಗೆ ಮಾರಕವಾಗಿಲ್ಲ. ೩೩ ಸಂವತ್ಸರಗಳನ್ನು ದಾಟಿ ೩೪ ನೇ ಸಂವತ್ಸರ ಸವತ್ಸರದಲ್ಲಿ ಮುನ್ನಿಗ್ಗುತಿರಿವುದು ಇದಕ್ಕೆ ಸಾಕ್ಷಿ. ಹಿಂದೆಯೇ ವಿದ್ವಾಸಂರುಗಳೆಲ್ಲಾ ದೃಕ್ ಪಂಚಾಂಗ ಮತ್ತು ಸೌರ ಪಂಚಾಂಗಗಳಲ್ಲಿ ದೃಕ್ ಗಣಿತ ರೀತ್ಯಾ ತಯಾರಿಸಲ್ಪಟ್ಟ ಪಂಚಾಂಗದ ಸಿದ್ಧಾಂತರೂಪವನ್ನು ಗ್ರಹಿಸಬೇಕೆಂದು ನಿರ್ಣಯಿಸಿದ್ದಾರೆ.